Siddeshwar Temple is in Karigar Oni, Katkol Hobli, Ramdurg Taluk, Belagavi District, Karnataka.
ಸಿದ್ಧೇಶ್ವರ ದೇವಾಲಯವು ಕರ್ನಾಟಕದ ಬೆಳಗಾವಿ ಜಿಲ್ಲೆ, ರಾಮದುರ್ಗ ತಾಲೂಕು, ಕಟಕೋಳ ಹೋಬಳಿ, ಕಾರಿಗರ್ ಓಣಿಯಲ್ಲಿ ಇದೆ.
Siddeshwar Temple is highly revered not only in the local region but also by devotees from neighboring states. Every Sunday and Amavasya, a special ritual called Gaddige is performed.
ಈ ದೇವಾಲಯವು ಸ್ಥಳೀಯರಲ್ಲದೇ ನೆರೆಯ ರಾಜ್ಯಗಳಿಂದಲೂ ಭಕ್ತರನ್ನು ಆಕರ್ಷಿಸುತ್ತದೆ. ಪ್ರತಿ ಭಾನುವಾರ ಮತ್ತು ಅಮಾವಾಸ್ಯೆ ದಿನ 'ಗದ್ದುಗೆ' ನಡೆಯುತ್ತದೆ.
The Gaddige is narrated by the temple priest from a hereditary lineage. Currently, the second-generation Guruji Shidrayappa performs this. The first-generation Guru was Yallappa Ajjar. Devotees believe that the third-generation Guru will also appear, as predicted by the first Guru.
ಈ ಗದ್ದುಗೆಯ ಪರಂಪರೆಯಿಂದ ಬರೋ ದೇವಾಲಯದ ಪೂಜಾರಿ ಹೇಳುತ್ತಾರೆ. ಸದ್ಯದ ಗುರುಜಿ ಶಿದ್ರಾಯಪ್ಪ ದ್ವಿತೀಯ ಪೀಳಿಗೆ. ಪ್ರಥಮ ಪೀಳಿಗೆ ಗುರು ಯಲ್ಲಪ್ಪ ಅಜ್ಜರ್ ಆಗಿದ್ದರು. ಮೊದಲ ಗುರುವಿನ ಪ್ರಕಾರ ಮುಂದಿನ ಪೀಳಿಗೆಯ ಗುರು ಕೂಡ ಬರುವರೆಂದು ಭಕ್ತರು ನಂಬಿದ್ದಾರೆ.
Note: Gaddige may not happen on some days depending on Guruji’s health or other circumstances.
ಸಾಮಾನ್ಯವಾಗಿ ಗದ್ದುಗೆ ನಡೆಯುತ್ತೆ ಆದರೆ ಕೆಲ ದಿನಗಳಲ್ಲಿ ಗುರುಜಿಯ ಆರೋಗ್ಯ ಅಥವಾ ಇತರ ಕಾರಣಗಳಿಂದ ನಡೆಯದೇ ಇರಬಹುದು.
The temple fair (Jatre) happens after Dussehra, on the day of Mrugashira Nakshatra, and lasts for 3 days. A special Prasada called Bhandar is offered to the deity and devotees.
ದಸರಾ ಹಬ್ಬದ ನಂತರ ಮೃಗಶಿರ ನಕ್ಷತ್ರದ ದಿನ 3 ದಿನಗಳ ಜಾತ್ರೆ ನಡೆಯುತ್ತದೆ. ಭಂಡಾರ ಎಂಬ ವಿಶೇಷ ಪ್ರಸಾದ ಭಕ್ತರಿಗೆ ನೀಡಲಾಗುತ್ತದೆ.
ಭಕ್ತರು ಈ 3 ದಿನಗಳಲ್ಲೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಮತ್ತು ದೇವರ ಸೇವೆ ಮಾಡುವ ಅವಕಾಶವನ್ನು ಪಡೆಯುತ್ತಾರೆ.
Devotees strongly believe that by offering Seva to Lord Siddeshwar on Sundays and Amavasya, they receive blessings for:
ಸಿದ್ದೇಶ್ವರನಿಗೆ ಭಕ್ತಿಯಿಂದ ಸೇವೆ ಮಾಡಿದರೆ ಆರೋಗ್ಯ ಸಮಸ್ಯೆ, ಕುಟುಂಬದ ಸಮಸ್ಯೆ, ಆತ್ಮಶಾಂತಿ, ಮಾಂಸಿಕ ಸ್ಥಿತಿ, ದುಷ್ಟ ಶಕ್ತಿಗಳಿಂದ ರಕ್ಷಣೆ ಇತ್ಯಾದಿಗಳಲ್ಲಿ ಸಹಾಯವಾಗುತ್ತದೆ ಎಂದು ನಂಬಿಕೆ ಇದೆ. ಹಲವಾರು ಭಕ್ತರು ಮಕ್ಕಳಿಲ್ಲದೇ ಇದ್ದಾಗ ಸೇವೆ ಮಾಡಿದ ಮೇಲೆ ಮಕ್ಕಳಾದ ಘಟನೆಗಳು ಕೂಡ ಕೇಳಿಬಂದಿವೆ.
It is believed that Siddeshwar Swamy originated from Asangi, a place in Karnataka, and came to Katkol in a miraculous way. As part of tradition, every Yugadi, water is brought from the river in Asangi and used for Abhisheka.
ಸಿದ್ಧೇಶ್ವರ ಸ್ವಾಮಿ ಕರ್ನಾಟಕದ ಆಸಂಗಿಯಿಂದ ಅತಿ ಅದ್ಭುತ ರೀತಿಯಲ್ಲಿ ಇಲ್ಲಿ ಕಟಕೋಳಕ್ಕೆ ಬಂದರೆಂದು ನಂಬಲಾಗಿದೆ. ಯುಗಾದಿ ದಿನ ಭಕ್ತರು ಆಸಂಗಿಯಿಂದ ನದಿಯ ನೀರನ್ನು ತಂದು ಅಭಿಷೇಕ ಮಾಡುತ್ತಾರೆ
ಪ್ರತಿದಿನ ಬೆಳಿಗ್ಗೆ 8 ರಿಂದ 9 ರವರೆಗೆ, ಸಂಜೆ 7 ರಿಂದ 8 ರವರೆಗೆ ಪೂಜೆ ನಡೆಯುತ್ತದೆ. ಭಾನುವಾರ ವಿಶೇಷ ಪೂಜೆ ನಡೆಯುತ್ತದೆ.
ಕಟಕೋಳಕ್ಕೆ ಹತ್ತಿರದ ಊರುಗಳಿಂದ ನಿತ್ಯ ಬಸ್ ಸೌಲಭ್ಯವಿದೆ. ಯಾರಗಟ್ಟಿ, ರಾಮದುರ್ಗ ಮತ್ತು ಲೋಕಾಪುರದಿಂದ ಸುಲಭವಾಗಿ ತಲುಪಬಹುದು.
🗣️ Devotee Comments